Vivo V50 Elite Edition ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

Vivo V50 Elite Edition ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
HIGHLIGHTS

ಭಾರತದಲ್ಲಿ Vivo V50 Elite Edition ಬಿಡುಗಡೆಗೆ ಡೇಟ್ ಕಂಫಾರ್ಮ್ ಮಾಡಿದ ವಿವೋ.

Vivo V50 Elite Edition ಸ್ಮಾರ್ಟ್ಫೋನ್ 15ನೇ ಮೇ 2025 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ.

Vivo V50 Elite Edition ಸ್ಮಾರ್ಟ್ಫೋನ್ ಅನೇಕ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ZEISS ಕ್ಯಾಮೆರಾವನ್ನು ಹೊಂದಿದೆ.

Vivo V50 Elite Edition launch announced: ವಿವೋ ಸ್ಮಾರ್ಟ್ಫೋನ್ ಕಂಪನಿ ತನ್ನ ಮುಂಬರಲಿರುವ Vivo V50 Elite Edition ಸ್ಮಾರ್ಟ್ಫೋನ್ ಭಾರತದಲ್ಲಿನ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಸ್ಮಾರ್ಟ್ಫೋನ್ ಅನೇಕ ಇಂಟ್ರೆಸ್ಟಿಂಗ್ ಫೀಚರ್ಗಳನ್ನು ಹೊಂದಿದ್ದು ZEISS ಕ್ಯಾಮೆರಾ ಲೆನ್ಸ್ ಬರುವುದರೊಂದಿಗೆ ಇದೊಂದು ಕ್ಯಾಮೆರಾ ಪ್ರಿಯರನ್ನು ಗುರಿಯಾಗಿಸಿಕೊಂಡು ಬಿಡುಗಡೆಯಾಗಲಿರುವುದನ್ನು ಖಚಿತಪಡಿಸುತ್ತದೆ. ವಿವೋ (Vivo) ಕಂಪನಿ ಇದನ್ನು ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಗೊಳಿಸಿ ಮಾರಾಟ ಮಾಡುವ ನಿರೀಕ್ಷೆಗಳಿವೆ.

Vivo V50 Elite Edition ನಿರೀಕ್ಷಿತ ಬೆಲೆ ಮತ್ತು ಬಿಡುಗಡೆಯ ಡೇಟ್:

ಪ್ರಸ್ತುತ ವಿವೊ ಟ್ವಿಟ್ಟರ್ ಖಾತೆಯಲ್ಲಿ Vivo V50 Elite Edition ಸ್ಮಾರ್ಟ್ಫೋನ್ ಟೀಸರ್ ಮಾತ್ರ ಪೋಸ್ಟ್ ಮಾಡಿ ಹೆಚ್ಚು ಕುತೂಹಲವನ್ನು ಕೆರಳಿಸಿದೆ. ಪ್ರಸ್ತುತ ವಿವೋ ತನ್ನ ಟ್ವಿಟ್ಟರ್ ಖಾತೆಯಲ್ಲಿ ಇದರ ಬಗ್ಗೆ ಮಾಹಿತಿ ನೀಡಿದ್ದು Vivo V50 Elite Edition ಸ್ಮಾರ್ಟ್ಫೋನ್ 15ನೇ ಮೇ 2025 ರಂದು ಅಧಿಕೃತವಾಗಿ ಬಿಡುಗಡೆಯಾಗಲಿರುವುದನ್ನು ಪೋಸ್ಟ್ ಮಾಡಿದೆ. ಅಲ್ಲದೆ ಕಂಪನಿ ಇದನ್ನು ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಗೊಳಿಸಿ ಮಾರಾಟ ಮಾಡುವ ನಿರೀಕ್ಷೆಗಳಿವೆ.

ಇದನ್ನೂ ಓದಿ: ಸ್ಯಾಮ್‌ಸಂಗ್‌ನಿಂದ ವಿಶ್ವದ ಮೊದಲ 500Hz ರಿಫ್ರೇಶ್ ರೇಟ್‌ನ OLED Gaming Monitor ಪರಿಚಯ! ಬೆಲೆ ಮತ್ತು ಫೀಚರ್ಗಳೇನು?

ಸ್ಮಾರ್ಟ್ಫೋನ್ ನಿರೀಕ್ಷಿತ ಫೀಚರ್ಗಳ ಆಧಾರದ ಮೇರೆಗೆ ಎರಡು ಮಾದರಿಗಳಲ್ಲಿ ನಿರೀಕ್ಷಿಸಲಾಗಿದ್ದು ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ಸುಮಾರು 35,000 ರೂಗಳಿಗೆ ಮತ್ತೊಂದು 12GB RAM ಮತ್ತು 512GB ಸ್ಟೋರೇಜ್ ಸುಮಾರು 40,000 ರೂಗಳಿಗೆ ನಿರೀಕ್ಷಿಸಲಾಗಿದೆ.

Vivo V50 Elite Edition ನಿರೀಕ್ಷಿತ ಫೀಚರ್ ಮತ್ತು ವಿಶೇಷತೆಗಳೇನು?

Vivo V50 Elite Edition ಸ್ಮಾರ್ಟ್ ಫೋನ್ ಸುಮಾರು 6.78 ಇಂಚಿನ AMOLED ಡಿಸ್ಪ್ಲೇಯೊಂದಿಗೆ 120 Hz ರಿಫ್ರೇಶ್ ರೇಟ್ನೊಂದಿಗೆ 1080 x 2460 ಪಿಕ್ಸೆಲ್ ರೆಸಲ್ಯೂಷನ್ ಹೊಂದಿರುವ ಸಾಧ್ಯತೆಗಳಿವೆ. ಅಲ್ಲದೆ ಈಗಾಗಲೇ ಹೇಳಿರುವಂತೆ ಕಂಪನಿ ಇದನ್ನು ಕ್ಯಾಮೆರಾ ವಲಯದಲ್ಲಿ ಬಿಡುಗಡೆಗೊಳಿಸಲಿದ್ದು ಫೋನ್ ZEISS ಬ್ರಾಂಡೆಡ್ ಕ್ಯಾಮೆರಾ ವ್ಯವಸ್ಥೆಯನ್ನು ಪಡೆಯಲಿದೆ.

Vivo V50 Elite Edition launch date announced for India
Vivo V50 Elite Edition launch date announced for India

ಡುಯಲ್ ಕ್ಯಾಮೆರಾ ಸೆಟಪ್ನೊಂದಿಗೆ ಬರುವ ಈ ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾವನ್ನು ಮತ್ತೊಂದು 50MP ಟೆಲಿಫೋಟೋ ಮತ್ತು ಕೊನೆಯದಾಗಿ 8MP ಅಲ್ಟ್ರಾ ವೈಡ್ ಕ್ಯಾಮೆರಾ ಸೆನ್ಸರ್ ಬೆಂಬಲದೊಂದಿಗೆ ನಿರೀಕ್ಷಿಸಬಹುದು. ಅಲ್ಲದೆ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 50MP ಶೂಟರ್ ಹೊಂದಿರಬಹುದು.

ಇದನ್ನೂ ಓದಿ: ಭಾರತದಲ್ಲಿ Realme GT 7 Series ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!

Vivo V50 Elite Edition ಸ್ಮಾರ್ಟ್ ಫೋನ್ ಈಗಾಗಲೇ ಮೇಲೆ ತಿಳಿಸಿರುವಂತೆ ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ಜೊತೆಗೆ ಬರಲಿದ್ದು MediaTek Dimensity 8350 ಪ್ರೊಸೆಸರ್ ನಿರೀಕ್ಷಿಸಲಾಗಿದೆ. ಅಲ್ಲದೆ ಅನೇಕ AI ಆಧಾರಿತ ಫೀಚರ್ಗಳಿಂದ ತುಂಬಲಿರುವ ಈ ಸ್ಮಾರ್ಟ್ಫೋನ್ ಡಿಸೆಂಟ್ 6000mAh ಬ್ಯಾಟರಿ ಮತ್ತು 90w ಫಾಸ್ಟ್ ಚಾರ್ಜ್ ಅನ್ನು ಸಪೋರ್ಟ್ ಮಾಡುತ್ತದೆ. ಸ್ಮಾರ್ಟ್ಫೋನ್ ಬಗ್ಗೆ ಖಚಿತ ಮಾಹಿತಿಗಾಗಿ ನೀವು ಡಿಜಿಟ್ ಕನ್ನಡವನ್ನು ಫಾಲೋ ಮಾಡಬಹುದು ಯಾಕೆಂದರೆ ಕಂಪನಿ ಇದರ ಬಗ್ಗೆ ನೀಡುವ ಮಾಹಿತಿಗಳನ್ನು ಕನ್ನಡದಲ್ಲಿ ಸರವಾಗಿ ವಿವರಿಸಿ ತಿಳಿಸಲಿದ್ದೇವೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo
OSZAR »