ಭಾರತದಲ್ಲಿ Realme GT 7 Series ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!
ಭಾರತದಲ್ಲಿ Realme GT 7 Series ಬಿಡುಗಡೆಗೆ ಡೇಟ್ ಕಂಫಾರ್ಮ್ ಆಗಿದೆ.
Realme GT 7 Series ಇದೆ 27ನೇ ಮೇ 2025 ರಂದು ಮಧ್ಯಾಹ್ನ 1:30pm ಗಂಟೆಗೆ ನಿಗದಿಯಾಗಿದೆ.
Realme GT 7 Series ಬರೋಬ್ಬರಿ 7000mAh ಬ್ಯಾಟರಿ ಮತ್ತು 120W ಚಾರ್ಜರ್ನೊಂದಿಗೆ ಬಿಡುಗಡೆಯಾಗಲಿದೆ.
Realme GT 7 Series India launch date confirmed: ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ರಿಯಲ್‌ಮಿ ತನ್ನ ಮುಂಬರಲಿರುವ ಹೊಸ GT 7 Series ಅನ್ನು ಇಂದೇ 27ನೇ ಮೇ ರಂದು ಅಧಿಕೃತವಾಗಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಕಂಪನಿ ಈ ಸರಣಿಯಲ್ಲಿ Realme GT 7 ಮತ್ತು Realme GT 7T ಎಂಬ ಎರಡು 5G ಸ್ಮಾರ್ಟ್ ಫೋನ್ಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ರಿಯಲ್‌ಮಿ ಈಗಾಗಲೇ ಸೋಶಿಯಲ್ ಮೀಡಿಯದಲ್ಲಿ ಈ ಸ್ಮಾರ್ಟ್ ಫೋನ್ಗಳ ಟೀಸರ್ ಪೋಸ್ಟ್ ಮಾಡಿದ್ದು ಬರೋಬ್ಬರಿ 7000mAh ಬ್ಯಾಟರಿಯೊಂದಿಗೆ 120W ಚಾರ್ಜಿಂಗ್ ಅನ್ನು ಬೆಂಬಲಿಸುವುದನ್ನು ಕಂಫಾರ್ಮ್ ಮಾಡಿದೆ. ಹಾಗಾದ್ರೆ Realme GT 7 Series ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ.
Realme GT 7 Series ಬಿಡುಗಡೆಗೆ ಡೇಟ್ ಕಂಫಾರ್ಮ್!
ಭಾರತದಲ್ಲಿ Realme GT 7 Series ಬಿಡುಗಡೆಯನ್ನು 27ನೇ ಮೇ 2025 ರಂದು ಮಧ್ಯಾಹ್ನ 1:30pm ಗಂಟೆಗೆ ಮಂಗಳವಾರ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಜಾಗತಿಕವಾಗಿ ಬಿಡುಗಡೆಯಾಗುತ್ತಿದೆ. ನೀವು ಭಾರತದಲ್ಲಿ ನೆಲೆಸಿದ್ದರೆ ಈ ಕಾರ್ಯಕ್ರಮವನ್ನು ಭಾರತೀಯ ಕಾಲಮಾನ ಮಧ್ಯಾಹ್ನ 1:30 ರಿಂದ ಆನ್‌ಲೈನ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಈ Realme GT 7 ಮತ್ತು Realme GT 7T ಸ್ಮಾರ್ಟ್ ಫೋನ್ಗಳು ಕಳೆದ ವರ್ಷ ಬಿಡುಗಡೆಯಾದ Realme GT 6 ಮತ್ತು Realme GT 6T ಸ್ಮಾರ್ಟ್ ಫೋನ್ ಮಾದರಿಗಳ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲಿವೆ.
Realme GT 7 Series ಅಧಿಕೃತ ಟ್ವಿಟ್ಟರ್ ಪೋಸ್ಟ್!
What's the solution of anxiety life? The answer is the strongest battery combo with 7000mAh + 120W. #realmeGT7Series #2025FlagshipKiller pic.twitter.com/PDHgGr2OOW
— realme Global (@realmeglobal) May 12, 2025
Realme GT 7 Series ನಿರೀಕ್ಷಿತ ಫೀಚರ್ಗಳೇನು!
ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿರುವ ಈ ಸ್ಮಾರ್ಟ್ಫೋನ್ ವರದಿಗಳ ಪ್ರಕಾರ ಚೀನಾದಲ್ಲಿ ಬಿಡುಗಡೆಯಾದ ಸ್ಟ್ಯಾಂಡರ್ಡ್ ರೂಪಾಂತರವು ಮೀಡಿಯಾ ಟೆಕ್ ಡೈಮೆನ್ಸಿಟಿ 9400+ ಚಿಪ್‌ಸೆಟ್ ಅನ್ನು ಪಡೆಯುತ್ತದೆ ಮತ್ತು 7200mAh ಬ್ಯಾಟರಿಯೊಂದಿಗೆ ಜಾಗತಿಕ ಆವೃತ್ತಿಗೆ ಅದೇ ಬಳಸುವುದನ್ನು ನಾವು ನೋಡಬಹುದು.
Realme GT 7 ಸ್ಮಾರ್ಟ್ ಫೋನ್ 6.78-ಇಂಚಿನ ಪೂರ್ಣ-HD+ OLED ಡಿಸ್ಪ್ಲೇಯನ್ನು 144Hz ರಿಫ್ರೆಶ್ ರೇಟ್ ಪರದೆಯೊಂದಿಗೆ ಪಡೆಯುತ್ತದೆ. ಇದು 7700mm ಚದರ VC ಕೂಲಿಂಗ್ ಚೇಂಬರ್‌ನೊಂದಿಗೆ ಬರುತ್ತದೆ ಮತ್ತು ಧೂಳು ಮತ್ತು ನೀರಿನ-ನಿರೋಧಕತೆಗಾಗಿ IP69 ರೇಟಿಂಗ್ ಅನ್ನು ಪಡೆಯುತ್ತದೆ. ಈ ಸ್ಮಾರ್ಟ್ ಫೋನ್ 50MP ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಮತ್ತು 16MP ಸೆಲ್ಫಿ ಶೂಟರ್ ಅನ್ನು ಹೊಂದಿದೆ. ಆದಾಗ್ಯೂ ಸ್ಮಾರ್ಟ್ ಫೋನ್ ಭಾರತೀಯ ಮತ್ತು ಜಾಗತಿಕ ರೂಪಾಂತರಗಳ ಕುರಿತು ವಿವರಗಳು ಇನ್ನೂ ತಿಳಿದುಬಂದಿಲ್ಲ.
ಹೆಚ್ಚುವರಿಯಾಗಿ Realme GT 7 ಹೊಸ ಗ್ರ್ಯಾಫೀನ್ ಆಧಾರಿತ ಐಸ್‌ಸೆನ್ಸ್ ವಿನ್ಯಾಸವನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದು ನಂಬಲಾಗದಷ್ಟು ಪರಿಣಾಮಕಾರಿ ತಂಪಾಗಿಸುವಿಕೆಗಾಗಿ ಅವರ ಇತ್ತೀಚಿನ ತಂತ್ರಜ್ಞಾನವಾಗಿರಬಹುದು. ಕಠಿಣ ಗೇಮಿಂಗ್ ಅಥವಾ ಬಹುಕಾರ್ಯಕ ಸಮಯದಲ್ಲಿ ತಾಪಮಾನವನ್ನು ನಿಯಂತ್ರಣದಲ್ಲಿಡಲು ಅದರ 360-ಡಿಗ್ರಿ ಶಾಖ ಪ್ರಸರಣ ವ್ಯವಸ್ಥೆಯು ಫೋನ್‌ನ ಪರದೆ ಮತ್ತು ಹಿಂಬದಿಯನ್ನು ಗ್ರ್ಯಾಫೀನ್‌ನಲ್ಲಿ ಸುತ್ತುವರೆದಿದೆ ಎಂದು Realme ಹೇಳುತ್ತದೆ.
Realme GT 7 Series ನಿರೀಕ್ಷಿತ ಬೆಲೆ ಎಷ್ಟು?
ಪ್ರಸ್ತುತ ಕಂಪನಿ ಇನ್ನೂ ಅಧಿಕೃತ ಬೆಲೆಗಳನ್ನು ದೃಢೀಕರಿಸಲ್ಪಟ್ಟಿಲ್ಲವಾದರೂ ಈ Realme GT 7T ಫೀಚರ್ ಮತ್ತು ಲುಕ್ ಆಧಾರದ ಮೇರೆಗೆ ಆರಂಭಿಕ ಬೆಲೆಯನ್ನು ರೂ. 41,999 ರಿಂದ ರೂ. 44,999 ರವರೆಗೆ ಇಡುವ ನಿರೀಕ್ಷೆಗಳಿವೆ. ಇದರ ಕ್ರಮವಾಗಿ Realme GT 7 ಫೀಚರ್ ಮತ್ತು ಲುಕ್ ಆಧಾರದ ಮೇರೆಗೆ ಸುಮಾರು ರೂ. 32,999 ರಿಂದ ರೂ. 35,999 ವರೆಗೆ ಇಡುವ ನಿರೀಕ್ಷೆಗಳಿವೆ. ಈ ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಅಮೆಜಾನ್ ಇಂಡಿಯಾದ ಸೈಟ್ ಮೂಲಕ ಬಿಡುಗಡೆಯಾಗಿ ಮಾರಾಟವಾಗಲಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile