Samsung Galaxy S25 ಬರೋಬ್ಬರಿ 11,000 ರೂಗಳ ಬೆಲೆ ಕಳೆದುಕೊಂಡು ಮಾರಾಟ! ಲಿಮಿಟೆಡ್ ಸಮಯಕ್ಕೆ ಭರ್ಜರಿ ಆಫರ್ಗಳು!

Samsung Galaxy S25 ಬರೋಬ್ಬರಿ 11,000 ರೂಗಳ ಬೆಲೆ ಕಳೆದುಕೊಂಡು ಮಾರಾಟ! ಲಿಮಿಟೆಡ್ ಸಮಯಕ್ಕೆ ಭರ್ಜರಿ ಆಫರ್ಗಳು!
HIGHLIGHTS

ಸ್ಯಾಮ್‌ಸಂಗ್‌ ತನ್ನ ಪ್ರೀಮಿಯಂ ಸ್ಮಾರ್ಟ್ಫೋನ್ Samsung Galaxy S25 ಬೆಲೆ ಕಡಿತಗೊಳಿಸಿದೆ.

Samsung Galaxy S25 ಸೀಮಿತ ಅವಧಿಗೆ ಬರೋಬ್ಬರಿ ₹11,000 ರೂಗಳ ಬೆಲೆ ಕಳೆದುಕೊಂಡಿದೆ.

Samsung Galaxy S25 ಆರಂಭಿಕ ₹64,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಲು ಲಭ್ಯವಿದೆ.

ಸ್ಯಾಮ್‌ಸಂಗ್‌ ಅಧಿಕೃತವಾಗಿ ಲಿಮಿಟೆಡ್ ಸಮಯಕ್ಕೆ ಭರ್ಜರಿ ಆಫರ್ಗಳನ್ನು ಪ್ರೀಮಿಯಂ Samsung Galaxy S25 ಸ್ಮಾರ್ಟ್ಫೋನ್ ಮೇಲೆ ಘೋಷಿಸಿದೆ. ಈ ಸ್ಮಾರ್ಟ್ಫೋನ್ ಇದೆ ಜನವರಿಯಂದು ಬಿಡುಗಡೆಯಾಗಿದ್ದು ಆಗ ಆರಂಭಿಕ ಬರೋಬ್ಬರಿ ₹74,999 ರೂಗಳಿಗೆ ಪರಿಚಾಯಿಸಲಾಗಿತ್ತು ಈ ಸ್ಮಾರ್ಟ್ಫೋನ್ ಅನೇಕ ಇಂಟ್ರೆಸ್ಟಿಂಗ್ AI ಫೀಚರ್ಗಳಿಂದ ತುಂಬಿದ್ದು ಪವರ್ಫುಲ್ ಅಡ್ವಾನ್ಸ್ ಫೀಚರ್ಗಳನ್ನು ಹೊಂದಿದೆ.

ಸ್ಯಾಮ್‌ಸಂಗ್‌ ತನ್ನ ಈ ಜಬರ್ದಸ್ತ್ ಫೋನ್ ಮೇಲೆ ಪ್ರಸ್ತುತ ಬರೋಬ್ಬರಿ 11,000 ರೂಗಳ ಬೆಲೆ ಕಡಿತವನ್ನು ಹೊಂದಿದೆ. ನಿಮಗೊಂದು ಅತ್ಯುತ್ತಮ ಕ್ಯಾಮೆರಾ ಮತ್ತು ಫುಲ್ ಫೀಚರ್ ಲೋಡೆಡ್ ಸ್ಮಾರ್ಟ್ಫೋನ್ ಖರೀದಿಸಲು ಬಯಸಿದರೆ ಈ Samsung Galaxy S25 ಸ್ಮಾರ್ಟ್ಫೋನ್ ಖರೀದಿಸಲು ಅತ್ಯುತ್ತಮ ಅವಕಾಶವನ್ನು ನೀಡುತ್ತಿದೆ.

ಇದನ್ನೂ ಓದಿ: Vivo V50 Elite Edition ಸ್ಮಾರ್ಟ್ಫೋನ್ Zeiss ಕ್ಯಾಮೆರಾದೊಂದಿಗೆ ಬಿಡುಗಡೆ! ಆಫರ್ ಬೆಲೆ ಮತ್ತು ಟಾಪ್ ಹೈಲೈಟ್‌ಗಳೇನು?

Samsung Galaxy S25 ಲಿಮಿಟೆಡ್ ಸಮಯಕ್ಕೆ ಭರ್ಜರಿ ಆಫರ್ಗಳು!

Samsung Galaxy S25 ಸ್ಮಾರ್ಟ್ಫೋನ್ 11,000 ರೂಗಳ ಅಪ್‌ಗ್ರೇಡ್ ಬೋನಸ್ ಅನ್ನು ನೀಡುತ್ತಿದ್ದು 12GB/128GB ರೂಪಾಂತರದ ಬೆಲೆಯನ್ನು 74,999 ರೂ.ಗಳಿಂದ 63,999 ರೂಗಳಿಗೆ ಇಳಿಸಲಾಗಿದೆ. ಗ್ರಾಹಕರು ತಮ್ಮ ಖರೀದಿಯ ಮೇಲೆ ಪರ್ಯಾಯ 10,000 ರೂಗಳ ಬ್ಯಾಂಕ್ ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯಬಹುದು.

Samsung Galaxy S25 Gets Massive Price Cut
Samsung Galaxy S25 Gets Massive Price Cut

ಈ ಕೊಡುಗೆಗಳು samsung.com ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಭಾರತದಾದ್ಯಂತದ ಚಿಲ್ಲರೆ ಮಾರಾಟ ಸ್ಥಳಗಳಲ್ಲಿ ಲಭ್ಯವಿದೆ. ಗ್ರಾಹಕರು 8,000 ರೂಗಳ ಬ್ಯಾಂಕ್ ಕ್ಯಾಶ್‌ಬ್ಯಾಕ್‌ನೊಂದಿಗೆ ಒಂಬತ್ತು ತಿಂಗಳ ನೋ-ಕಾಸ್ಟ್ EMI ಅಥವಾ NBFC ಮೂಲಕ 24 ತಿಂಗಳ ನೋ-ಕಾಸ್ಟ್ EMI ಅನ್ನು ಸಹ ಆಯ್ಕೆ ಮಾಡಬಹುದು.

Samsung Galaxy S25 ಫೀಚರ್ಗಳೇನು?

Samsung Galaxy S25 ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್ ಫೋನ್ ಐಸಿ ಬ್ಲೂ, ಮಿಂಟ್, ಕೋರಲ್ ರೆಡ್ ಮತ್ತು ಪಿಂಕ್ ಗೋಲ್ಡ್‌ನಂತಹ ವಿವಿಧ ಬಣ್ಣಗಳಲ್ಲಿ ಬರುತ್ತದೆ. ಇದು ಅಲ್ಯೂಮಿನಿಯಂ ಫ್ರೇಮ್ ಹೊಂದಿದೆ. Galaxy S25 ಫೋನ್ 6.2 ಇಂಚಿನ ಡೈನಾಮಿಕ್ AMOLED 2X ಡಿಸ್ಪ್ಲೇ ಜೊತೆಗೆ 2340 x 1080 (FHD+) ಮತ್ತು 120 Hz ರಿಫ್ರೆಶ್ ದರವನ್ನು ಹೊಂದಿದೆ. ಸ್ಯಾಮ್‌ಸಂಗ್‌ Snapdragon 8 Elite ಪ್ರೊಸೆಸರ್‌ನಿಂದ 12GB RAM ಮತ್ತು 512GB ವರೆಗೆ ಸ್ಟೋರೇಜ್ ಜೋಡಿಸಲ್ಪಟ್ಟಿದೆ.

ಇದನ್ನೂ ಓದಿ: Godrej 1 Ton Inverter Split AC ಮೇಲೆ ಅದ್ದೂರಿಯ ಡೀಲಗಳನ್ನು ನೀಡುತ್ತಿರುವ ಅಮೆಜಾನ್! ಬೆಲೆ ಮತ್ತು ಫೀಚರ್ಗಳೇನು?

ಈ Galaxy S25 ಸ್ಯಾಮ್‌ಸಂಗ್‌ನ One UI ಜೊತೆಗೆ Android ನಲ್ಲಿ ರನ್ ಆಗುತ್ತದೆ. Samsung Galaxy S25 ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50MP ಪ್ರೈಮರಿ ಸೆನ್ಸರ್ (f/1.8), 10MP ಟೆಲಿಫೋಟೋ ಜೊತೆಗೆ 3x ಆಪ್ಟಿಕಲ್ ಜೂಮ್, 12MP ಅಲ್ಟ್ರಾ-ವೈಡ್. ಇದು 30fps ನಲ್ಲಿ 8K ವೀಡಿಯೊ ರೆಕಾರ್ಡಿಂಗ್ ಮತ್ತು 240fps ವರೆಗೆ ಸ್ಲೋ-ಮೋಷನ್ ಕ್ಯಾಪ್ಚರ್ ಅನ್ನು ಸಹ ಬೆಂಬಲಿಸುತ್ತದೆ.

Samsung Galaxy S25 ಸ್ಮಾರ್ಟ್ಫೋನ್ 4000mAh ಬ್ಯಾಟರಿಯನ್ನು ಹೊಂದಿದೆ. ಕಂಪನಿಯು 29 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ಭರವಸೆ ನೀಡುತ್ತದೆ. ಇದು USB-C, ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಮೂಲಕ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo
OSZAR »