Samsung Galaxy S25 Edge vs Moto Razr 60 Ultra ಫೋನ್‌ಗಳಲ್ಲಿ ‌ಯಾವುದು ಬೆಸ್ಟ್? ಬೆಲೆ ಮತ್ತು ಟಾಪ್ ಫೀಚರ್‌ಗಳೇನು ತಿಳಿಯಿರಿ!

HIGHLIGHTS

Samsung Galaxy S25 Edge vs Moto Razr 60 Ultra ಎರಡು ಒಂದೇ ದಿನ ಬಿಡುಗಡೆಯಾಗಿವೆ.

Samsung Galaxy S25 Edge vs Moto Razr 60 Ultra ಒಂದಕ್ಕೊಂದು ಹೋಲಿಸಿ ನೋಡಿ ಯಾವುದು ಬೆಸ್ಟ್?

Samsung Galaxy S25 Edge vs Moto Razr 60 Ultra ಫೋನ್‌ಗಳ ಬೆಲೆಗೆ ಎಷ್ಟು ಉತ್ತಮವಾಗಿದೆ ನೀವೇ ನೋಡಿ.

Samsung Galaxy S25 Edge vs Moto Razr 60 Ultra ಫೋನ್‌ಗಳಲ್ಲಿ ‌ಯಾವುದು ಬೆಸ್ಟ್? ಬೆಲೆ ಮತ್ತು ಟಾಪ್ ಫೀಚರ್‌ಗಳೇನು ತಿಳಿಯಿರಿ!

Samsung Galaxy S25 Edge vs Moto Razr 60 Ultra: ಭಾರತದಲ್ಲಿ ನೆನ್ನೆ ಅಂದರೆ 13ನೇ ಮೇ 2025 ರಂದು ಈ ಎರಡು ಸ್ಮಾರ್ಟ್ಫೋನ್ಗಳು Samsung Galaxy S25 Edge ಮತ್ತು Moto Razr 60 Ultra ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿವೆ. ಈ ಮೂಲಕ ನಿಮಗೊಂದು ಪ್ರೀಮಿಯಂ ಮತ್ತು ಲೇಟೆಸ್ಟ್ ಅಡ್ವಾನ್ಸ್ ಫೀಚರ್ಗಳನ್ನು ಹೊಂದಿರುವ ಹೊಸ 5G ಪವರ್ಫುಲ್ ಫೀಚರ್ ಲೋಡೆಡ್ ಸ್ಮಾರ್ಟ್ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಎರಡೂ ನಿಮ್ಮ ಜನಪ್ರಿಯ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಆದ್ದರಿಂದ Samsung Galaxy S25 Edge vs Moto Razr 60 Ultra ಇವುಗಳ ಆಫರ್ ಬೆಲೆ, ಫೀಚರ್ ಮತ್ತು ವಿಶೇಷತೆಗಳ ಆಧಾರದ ಮೇಲೆ ಒಂದಕ್ಕೊಂದು ಹೋಲಿಸಿ ಯಾವುದು ಬೆಸ್ಟ್ ಕಮೆಂಟ್ ಮಾಡಿ ತಿಳಿಸಿ.

Samsung Galaxy S25 Edge vs Moto Razr 60 Ultra ಡಿಸ್ಪ್ಲೇ ಮಾಹಿತಿ:

ಮೊದಲಿಗೆ Samsung Galaxy S25 Edge ಫೋನ್ 6.7 ಇಂಚಿನ ಪೂರ್ಣ Dynamic AMOLED 2X ಡಿಸ್ಪ್ಲೇಯನ್ನು ಹೊಂದಿದ್ದು 3120 x 1440 (Quad HD+) ರೆಸಲ್ಯೂಶನ್ ಹೊಂದಿದೆ. ಹೆಚ್ಚುವರಿಯಾಗಿ ಫೋನ್ 120Hz ರಿಫ್ರೇಶ್ ರೇಟ್ ಸಪೋರ್ಟ್ ಮಾಡುತ್ತದೆ. ಅದೇ Moto Razr 60 Ultra ಸ್ಮಾರ್ಟ್ಫೋನ್ 6.96 ಇಂಚಿನ pOLED Foldable AMOLED ಡಿಸ್ಪ್ಲೇಯನ್ನು ಹೊಂದಿದ್ದು 2992 x 1224 (HD+) ರೆಸಲ್ಯೂಶನ್ ಹೊಂದಿದೆ. ಹೆಚ್ಚುವರಿಯಾಗಿ ಫೋನ್ 165Hz ರಿಫ್ರೇಶ್ ರೇಟ್ ಸಪೋರ್ಟ್ ಮಾಡುತ್ತದೆ.

Samsung Galaxy S25 Edge vs Moto Razr 60 Ultra
Samsung Galaxy S25 Edge vs Moto Razr 60 Ultra

Samsung Galaxy S25 Edge vs Moto Razr 60 Ultra ಕ್ಯಾಮೆರಾ ಮಾಹಿತಿಗಳು

Samsung Galaxy S25 Edge ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 200MP ಪ್ರೈಮರಿ ಶೂಟರ್ ಮತ್ತು 12MP ಡೆಪ್ತ್ ಸೆನ್ಸರ್ ಜೊತೆಗೆ ಬರುತ್ತದೆ. ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 12MP ಶೂಟರ್ ಹೊಂದಿದೆ. ಇದರ ಕ್ರಮವಾಗಿ Moto Razr 60 Ultra ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 50MP ಪ್ರೈಮರಿ ಶೂಟರ್ ಮತ್ತು 50MP ಅಲ್ಟ್ರಾ ವೈಡ್ ಸೆನ್ಸರ್ ಜೊತೆಗೆ ಬರುತ್ತದೆ. ಇದರ ಕ್ರಮವಾಗಿ ಫೋನ್ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 50MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಇದನ್ನೂ ಓದಿ: ChatGPT Coffee Cup: ಕಾಫಿ ಕಪ್ ಮೂಲಕ ಪತಿಯ ಅನೈತಿಕ ಸಂಬಂಧ ಪತ್ತೆ ಹಚ್ಚಿದ ChatGPT! ವಿಚ್ಛೇದನಕ್ಕೆ ಅರ್ಜಿ ಹಾಕಿದ ಮಹಿಳೆ!

Samsung Galaxy S25 Edge vs Moto Razr 60 Ultra ಹಾರ್ಡ್ವೇರ್ ಮಾಹಿತಿಗಳು:

Samsung Galaxy S25 Edge ಸ್ಮಾರ್ಟ್ಫೋನ್ ಹಾರ್ಡ್ವೇರ್ ಬಗ್ಗೆ ಮಾತಾನಡುವುದಾದರೆ ಇದರಲ್ಲಿ ನಿಮಗೆ Samsung Galaxy S25 Edge ಸ್ಮಾರ್ಟ್ಫೋನ್‌ ಆರಂಭಿಕ 12GB RAM ಆನ್‌ಬೋರ್ಡ್ ಮೆಮೊರಿಯೊಂದಿಗೆ Qualcomm Snapdragon 8 Elite ಪ್ರೊಸೆಸರ್‌ನೊಂದಿಗೆ ಬರುತ್ತದೆ. Moto Razr 60 Ultra ಸ್ಮಾರ್ಟ್ಫೋನ್ ಸಹ ಅದೇ Qualcomm Snapdragon 8 Elite ಪ್ರೊಸೆಸರ್‌ನೊಂದಿಗೆ ಆರಂಭಿಕ 16GB RAM ಆನ್‌ಬೋರ್ಡ್ ಮೆಮೊರಿಯೊಂದಿಗೆ ಮತ್ತು 512GB ಸ್ಟೋರೇಜ್ ಸ್ಟೋರೇಜ್ ಜೊತೆಗೆ ಈ ಫೋನ್ ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ.

Samsung Galaxy S25 Edge vs Moto Razr 60 Ultra ಬ್ಯಾಟರಿ ಮತ್ತು ಕನೆಕ್ಟಿವಿಟಿ:

Samsung Galaxy S25 Edge ಸ್ಮಾರ್ಟ್ಫೋನ್ 25W ಫಾಸ್ಟ್ ಚಾರ್ಜಿಂಗ್ ಜೊತೆ 3900mAh ಬ್ಯಾಟರಿಯನ್ನು ಬೆಂಬಲಿಸುತ್ತದೆ. Moto Razr 60 Ultra 5G ಫ್ಲಿಪ್ ಸ್ಮಾರ್ಟ್‌ಫೋನ್‌ 4700 mAh ಬ್ಯಾಟರಿಯನ್ನು ಹೊಂದಿದ್ದು ಬಾಕ್ಸ್ ಒಳಗೆ 68W ಚಾರ್ಜರ್ ಅನ್ನು ಹೊಂದಿದೆ. ಇದಲ್ಲದೆ ಫೋನ್ 30W ವೈರ್‌ಲೆಸ್ ಚಾರ್ಜಿಂಗ್ ಜೊತೆಗೆ 5W ರಿವರ್ಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

Samsung Galaxy S25 Edge vs Moto Razr 60 Ultra ಬೆಲೆ ಮತ್ತು ಲಭ್ಯತೆ:

Samsung Galaxy S25 Edge ಭಾರತೀಯ ಮಾರುಕಟ್ಟೆಯಲ್ಲಿ 12GB RAM + 256GB ಬೆಲೆ 1,09,999 ರೂ.ಗಳಾಗಿದ್ದು ಇದರ ಟಾಪ್ 12GB RAM + 512GB ರೂಪಾಂತರದ ಬೆಲೆ 1,21,999 ರೂ.ಗಳವರೆಗೆ ಇರುತ್ತದೆ. ಇದರ ಕ್ರಮವಾಗಿ Moto Razr 60 Ultra ಸ್ಮಾರ್ಟ್ ಫೋನ್ ಪ್ರಸ್ತುತ ಒಂದೇ ಒಂದು ಮಾದರಿಯಲ್ಲಿ ಲಭ್ಯವಿದ್ದು 16GB RAM ಮತ್ತು 512GB ಸ್ಟೋರೇಜ್ 89,999 ರೂಗಳಿಗೆ ಪರಿಚಯವಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo
OSZAR »